ಭಟ್ಕಳ, ಫೆಬ್ರವರಿ 28: ಇಲ್ಲಿನ ನಾಗಪ್ಪ ನಾಯ್ಕ ರಸ್ತೆಯಲ್ಲಿರುವ ಮನಯೊಂದರ ಹಿಂಬದಿ ಬಾಗಿಲು ಮುರಿದು ಒಳಕ್ಕೆ ನುಗ್ಗಿದ ಕಳ್ಳರು ಒಳಗಡೆ ಕಳುವಿಗೆ ಪ್ರಯತ್ನ ನಡೆಸುತ್ತಿರುವ ಸಂದರ್ಭದಲ್ಲಿ ಮನೆಯವರು ಎಚ್ಚರಗೊಂಡಿದ್ದರಿಂದ ಪರಾರಿಯಾದ ಘಟನೆ ನಡೆದಿದೆ.
ಈ ಕುರಿತು ಮನೆಯ ಮಾಲಿಕ ಸಯ್ಯದ್ ಮೊಹ್ಮದ್ ಸಯ್ಯದ್ ಅಲಿ ಬರ್ಮಾವರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳ್ಳರು ಹಿಂಬದಿ ಬಾಗಿಲಿನಿಂದ ಒಳಕ್ಕೆ ನುಗ್ಗಿ ಕಪಾಟಿನಲ್ಲಿದ್ದ ಸಾಮಗ್ರಿಗಳನ್ನು ದೋಚಲು ಯತ್ನಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.